ಅಯ್ಯೆಋ ಬಂಟೆರ್ ತಮ್ಮ ಕಥೆಯನ್ನು ಜಗತ್ತಿಗೆ ಸಾರಲು ನನ್ನನ್ನು ಕಾಯುತ್ತಿದ್ದರೇ ? ಕರಾವಳಿಯ ಸಾವಿರದೊಂದು ದೈವಗಳು

ಸುಮಾರು ಹದಿನೈದು ವರ್ಷಗಳ ಹಿಂದೆ ನಾಡೋಜ ಅಮೃತ ಸೋಮೇಶ್ವರರು ಒಮ್ಮೆ ಮಾತಿನ ನಡುವೆ “ಪುಣಿಚಿತ್ತಾಯರಿಗೆ ಎಲ್ಲಿ ಹೋದರೂ ಪ್ರಾಚೀನ ತುಳು ಗ್ರಂಥಗಳ ಹಸ್ತ ಪ್ರತಿ ಕಣ್ಣಿಗೆ ಬೀಳುತ್ತದೆ ಹಾಗೆಯೇ ನಿಮಗೂ ಎಲ್ಲಿ ಹೋದರೂ ಸ್ಥಳೀಯ ದೈವಗಳು ಕಾಣಿಸಿಕೊಂಡು ತಮ್ಮ ಕಥೆಯನ್ನು ಹೇಳುತ್ತವೆನಿಮಗೆ ದೈವಗಳು ಒಲಿದಿವೆ ನಿಮ್ಮ ಕೆಲಸ ಮುಂದುವರಿಸಿ.ಇದು ತುಳು ಸಂಸ್ಕೃತಿ ಗೆ ಒಂದು ದೊಡ್ಡ ಕೊಡುಗೆ ಆಗುತ್ತದೆ” ಎಂದಿದ್ದರು . ಅವರಿಗೆ ನನ್ನ ಬಗ್ಗೆ ಬಹಳ ಪ್ರೀತಿ ಅಭಿಮಾನ ಹಾಗಾಗಿ ಅವರಿಂದ ಈ ಮಾತು ಬಂದಿತ್ತು . ಅವರ ಈ ಮಾತು ನನಗೆ ನೆನಪಾದದ್ದು ಈವತ್ತು . ಕಳೆದ ವಾರ ಕಡಂಬಾರು ಮೂಲದ ಈಗ ಮುಂ ೈ ಯಲ್ಲಿ ನೆಲೆಸಿರುವ ಸಂ ತೋಷ್ ಎಂಬವರು ನನ್ನ ಕರಾವಳಿಯ ಸಾವಿರದೊಂದು ದೈವಗಳು ಗ್ರಂಥ ತಗೊಂಡಿದ್ದರು ಈವತ್ತು ಫೋನ್ ಮಾಡಿ "ನಾನು ಕಡಂಬಾರು ದೇವಾಲಯದ ನೀವು ಹೇಳಿದ ಅಯ್ಯರ್ ಬಂಟೆರ್ ದೈವಗಳ ಕಲ್ಲಿನ ಎದುರು ನೂರಾರು ಬಾರಿ ಓಡಾಡಿದ್ದೇನೆ.ಆದರೂ ಆ ಕಲ್ಲುಗಳು ದೈವಿಕವಾದವುಗಳು,ಅಲ್ಲಿ ಅಯ್ಯೆರ್ ಬಂಟೆರ್ ಎಂಬ ದೈವಗಳಿಗೆ ಆರಾಧನೆ ಇದೆ ಎಂದು ಗೊತ್ತೇ ಇರಲಿ ಲ್ಲ . ನಿಮಗೆ ನಿಜಕ್ಕೂ ದೈವಾನುಗ್ರಹ ಇದೆ "ಎಂದರು ನಾನು ಬಹಳ ವಾಸ್ತವಿಕ ನೆಲೆಯಲ್ಲಿ ಆಲೋಚನೆ ಮಾಡುವವಳು.ಆದರೂ ಯಾ ುದೇ ಸಂಘ ಸಂಸ್ಥೆಗಳ ಯೂನ ವರ್ಸಿಟಿ ಗಳ ಬೆಂಬಲ ಅನುದಾನವಿಲ್ಲದೆ ಏಕಾಂ ಿಯಾಗಿ ಓರ್ವ ಮಹಿಳೆ ಗೆ1253 ದೈವಗಳ ಮಾಹಿತಿಯನ್ನು ಸಂಗ್ರಹಿಸಲು ಸಾಧ್ಯವೇ?ಇದು ಖಂಡಿತ ...