1 ನಮ್ಮ ಹೆಮ್ಮೆಯ ಓದುಗ ಮಿತ್ರರು - ದೀಪಕ್ ಎಸ್ ಮುರುಡಿತ್ತಾಯ
ಬಹಳ ಹೆಮ್ಮೆಯಿಂದ ಹೇಳುತ್ತೇನೆ ನನ್ನ ಬಳಿ ಕರಾವಳಿಯ ಸಾವಿರದೊಂದು ದೈವಗಳು ಎಂಬ ಪುಸ್ತಕವಿದೆ.
ಪುಸ್ತಕದ ಗಾತ್ರವನ್ನು ನೋಡಿ ಒಂದು ಕ್ಷಣ ನಿಜವಾಗಿಯೂ ದಂಗಾದೆ. ಸಂಗ್ರಹಿಸಿರುವ ಮಾಹಿತಿ ಹಾಗೂ ಚಿತ್ರಗಳು ಲೇಖಕಿಯ ಪರಿಶ್ರಮ, ವಿಷಯದ ಮೇಲಿರುವ ಹಿಡಿತ, ಉತ್ಸಾಹಗಳನ್ನು ಎತ್ತಿ ತೋರಿಸುತ್ತದೆ.
ನಾವು ಮೂಲತ: ತುಳುವರಾದರೂ ,ದೈವಗಳ ಆರಾಧಕರಾದರೂ, ಇಷ್ಟೊಂದು ದೈವಗಳ ಕಥನ ಎಲ್ಲರಿಗೂ ತಿಳಿದಿರಲು ಸಾಧ್ಯ ವೇ ಇಲ್ಲ. ಭೂತಗಳ ಬಗ್ಗೆ ತಿಳಿದುಕೊಳ್ಳ ಬೇಕೆನ್ನುವವರಿಗೆ, ಭೂತಗಳ ಅಧ್ಯಯನ ಮಾಡಲು ಇದಕ್ಕಿಂತ ಉತ್ತಮಮಾಹಿತಿ ನೀಡುವ ಪುಸ್ತಕ ಸಧ್ಯಕ್ಕಂತು ಇಲ್ಲ.
ಒಬ್ಬ ಹೆಂಗಸಾಗಿ ರಾತ್ರಿ ನಡೆಯುವ ಭೂತ ಕೋಲಗಳಿಗೆ ಹೋಗಿ ಮಾಹಿತಿ ಸಂಗ್ರಹಿಸಲು ಎಂಟೆದೆಯೇ ಬೇಕು.ಹಾಗಾಗಿ ಲೇಖಕಿಯ ಧೈರ್ಯೋತ್ಸಾಹಗಳಿಗೆ ತಲೆ ಬಾಗಲೇ ಬೇಕು.ಅವರು ಈ ವಿಚಾರದಲ್ಲಿ ಅಭಿನಂದನೀಯರು.
ಎಲ್ಲಾಭೂತಗಳ ವಿಕಿಪೀಡೀಯಾ ಈ ಪುಸ್ತಕ.
ಮುಂದಿನ ಪೀಳಿಗೆಗಳಿಗೆ ಉತ್ತಮ, ಆಪೂರ್ವ ಮಾಹಿತಿಕೊಡಬಲ್ಲ ಉಡುಗೊರೆ ಮತ್ತು ಆಸ್ತಯಿದು.
ಮಾಹಿತಿ ಹಾಗು ಚಿತ್ರಗಳನ್ನು ನೀಡಿರುವವರ ಹೆಸರನ್ನು ಮುದ್ರಸಿ ಸಹಕರಿಸಿರುವ ಎಲ್ಲರನ್ನೂ ಸಮಾನವಾಗಿ ವಿನಯದಿಂದ ನೆನೆದು ಗೌರವಿಸಿದ ಪರಿ ತುಂಬಿದ ಕೊಡ ತುಳುಕುವುದಿಲ್ಲ ಎಂಬ ಮಾತನ್ನು ಜ್ಞಾಪಿಸುತ್ತದೆ
Lakshmi V ಮೇಡಂ ಧನ್ಯವಾದಗಳು.
Comments
Post a Comment