Posts

Showing posts from September, 2025

79 ಡಾ.ಸೂರ್ಯ ನಾರಾಯಣ ಶರ್ಮ‌: ಕರಾವಳಿಯ ಸಾವಿರದೊಂದು ದೈವಗಳು : ನಮ್ಮ‌ಹೆಮ್ಮೆಯ ಓದುಗ ಮಿತ್ರರು

Image
  ಬೆಟ್ಟದ ನೆಲ್ಲಿಕಾಯಿಗೂ ಸಮುದ್ರದ ಉಪ್ಪಿಗೂ ಎತ್ತಣ ಸಂಬಂಧ.. ಬೆಂಗಳೂರಿನ ಅಪೋಲೋ ಹಾಸ್ಪಿಟಲ್ ನ್ಯೂರಾಲಜಿ ವಿಬಾಗದ ಮುಖ್ಯಸ್ಥರಾದ ಖ್ಯಾತ ವೈದ್ಯರಾದ ಡಾ.ಸೂರ್ಯನಾರಾಯಣ ಶರ್ಮರು ಮುದ್ರಣದ ಸೂಕ್ಷ್ಮ ವಿಚಾರಗಳ ಬಗ್ಗೆ ಸೂಕ್ತ ಸಲಹೆಗಳನ್ನು ನೀಡಿ ಬೆಂಬಲಿಸಿದ್ದಲ್ಲದೆ ಕರಾವಳಿಯ ಸಾವಿರದೊಂದು ದೈವಗಳು ಕೃತಿಯನ್ನು ಪೂರ್ಣ ಬೆಲೆ 2000₹ ಕೊಟ್ಟು ಖರೀದಿಸಿ ಪ್ರೋತ್ಸಾಹಿಸಿದ್ದಾರೆ.ಈ ಮೊದಲು ರಾಮನವಮಿ ಪ್ರಯುಕ್ತ ಅವರು ಇತ್ತೀಚೆಗೆ ಪ್ರಕಟಿಸಿದ  ಅವರ ತಾತ ಬೇಲದಕೆರೆ ಸೂರ್ಯ ನಾರಾಯಣ ಶಾಸ್ತ್ರಿಗಳ ಆನಂದ ರಾಮಾಯಣಂ ಎಂಬ ಬೃಹತ್ ಕೃತಿಯನ್ನು ಉಡುಗೊರೆಯಾಗಿ ನೀಡಿದ್ದರು. ನಿಮ್ಮ ಪ್ರೀತಿ ಅಭಿಮಾನಗಳಿಗೆ ಧನ್ಯವಾದಗಳು ಡಾಕ್ಟ್ರೇ  Suryanarayana Sharma P M

78 ನಮ್ಮ ಹೆಮ್ಮೆಯ ಓದುಗ ಮಿತ್ರರು - ಡಾ.ಚೈತ್ರಾ ರೈ 78

Image
 ಪಿಎಚ್ ಡಿ ಅಧ್ಯಯನಕ್ಕೆ ಆಕರ ಗ್ರಂಥವಾಗಿರುವ ನಮ್ಮ ಪ್ರಕಟಣೆಯ ಕೃತಿ ಈ ಬಗ್ಗೆ ಡಾ.ಚೈತ್ರಾ ರೈ ಕೊಡಗು ಅವರ ಮಾತುಗಳು ಇಲ್ಲಿವೆ "#ನಮ್ಮ_ಹೆಮ್ಮೆಯ_ಓದುಗ_ಮಿತ್ರರು  #ಕರಾವಳಿಯ_ಸಾವಿರದೊಂದು_ದೈವಗಳು  ಡಾ.ಚಿತ್ರಾ ರೈ ಕೊಡಗು ಅವರ ಅಭಿಮಾನದ ಮಾತುಗಳು ಇಲ್ಲಿವೆ "ನನ್ನ  ಪಿಎಚ್.ಡಿ  ಗ್ರಂಥಕ್ಕೆ ದೈವಾರಾಧನೆಯ  ಮಾಹಿತಿಯನ್ನು ಸಮಗ್ರವಾಗಿ  ಒದಗಿಸಿದ ಅದ್ಭುತ ಪುಸ್ತಕ .ನೇರವಾಗಿ ಭೇಟಿಯಾಗದವರನನ್ನೂ ಮನಸ್ಸಿಗೆ ಹತ್ತಿರವಾಗಿಸುವ ಶಕ್ತಿ ಪುಸ್ತಕಕ್ಕಿದೆ ಎನ್ನುವುದು  ಸತ್ಯ.ನಿಮ್ಮ ( ಡಾ ಲಕ್ಷ್ಮೀ ಜಿ ಪ್ರಸಾದರ)  ಶ್ರಮ,ಕ್ಷೇತ್ರ ಕಾರ್ಯ ವೈಖರಿ, ವಿಷಯ ಸಂಗ್ರಹ ಮಾದರಿ,ಆತ್ಮ ಸ್ಥೈರ್ಯ ಪುಸ್ತಕ ಓದುವಾಗ ಅರ್ಥವಾಗುವುದು.ನಿಜಕ್ಕೂ ಈ ಪುಸ್ತಕ ಸಂಶೋಧಕರಿಗೆ  ಸಂಶೋಧನೆಯ ಹೊಸ ಮಾರ್ಗಸೂಚಿಯಾಗಿದೆ.ಈ ಪುಸ್ತಕ ನನ್ನ ಬಳಿ ಇದೆಯೆನ್ನುವುದೇ ಒಂದು ಹೆಮ್ಮೆ.ದೈವದ ಆಶೀರ್ವಾದದೊಂದಿಗೆ ನಿಮ್ಮ ಸಂಶೋಧನಾ ಪುಸ್ತಕ  ಹೆಚ್ಚಿನ ಸಂಖ್ಯೆಯಲ್ಲಿ ಸಹೃದಯಿಗಳನ್ನು ತಲುಪಲಿ. 🙏""

77 ನಮ್ಮ ಹೆಮ್ಮೆಯ ಓದುಗರು: ಅವಿನಾಶ್ ಬಿ ಕಡೂರು

Image
 ನಮ್ಮ ಹೆಮ್ಮೆಯ ಓದುಗರು  ಅವಿನಾಶ್ ಕಡೂರು ಕರಾವಳಿಯ ಸಾವಿರದೊಂದು ದೈವಗಳು ಇವರ ಪ್ರೀತಿ ಅಭಿಮಾನದ ಮಾತುಗಳು ಇಲ್ಲಿವೆ "ನಾನು ಒಂದೇ ಸಮನೆ ಎದುರು ನೋಡುತ್ತಿದ್ದ ನಿಮ್ಮ ಹೆಮ್ಮೆಯ ಗ್ರಂಥ ಸುಸ್ಥಿತಿಯಲ್ಲಿ  ಶಿಕ್ಷಕರ ದಿನಾಚರಣೆಯ ಶುಭ ಗುರುವಾರ ದ ದಿನವಾದ ಇಂದು ನನ್ನ ಕೈಸೇರಿತು,  ಗ್ರಂಥದ ಅಗಾಧತೆಯನ್ನು ಮೇಲ್ನೋಟಕ್ಕೆ ನೋಡಿದ ತಕ್ಷಣ ಅದಕ್ಕಾಗಿ ನೀವು ಪಟ್ಟಿರುವ ಶ್ರಮ ಕಳೆದ ಸಮಯ, ಸಂಪತ್ತಿನ ತ್ಯಾಗಗಳು ಎಷ್ಟಿರಬಹುದು ಎಂದು ಯೋಚಿಸಿಯೇ ನಿಮ್ಮ ಬಗ್ಗೆ ಅಪಾರವಾದ ಗೌರವ ಉಂಟಾಗಿ ನಿಜವಾಗಿಯೂ  ಕಣ್ಣುಗಳು ತುಂಬಿ ಬಂದವು, ನಿಮಗೆ ತಾಯಿ  ಮೂಕಾಂಬಿಕೆಯು ಉತ್ತಮ ಆರೋಗ್ಯ, ನೆಮ್ಮದಿ ಹಾಗೂ ಗೌರವ, ಸಂಪತ್ತನ್ನು ನೀಡಿ ನಿಮ್ಮ ಕನಸುಗಳನ್ನು ನನಸು ಮಾಡಲಿ ಎಂದು  ಪ್ರಾರ್ಥಿಸುತ್ತೇನೆ, ಕೆಲ ಮಾನವರು ಉತ್ತಮ ಕಾರ್ಯಗಳಿಂದ ನಮ್ಮ ನಾಡಿನಲ್ಲಿ ದೈವದ ಸ್ಥಾನ ಪಡೆದುಕೊಳುತ್ತಿದ್ದರು, ನೀವು ಮುಂದಿನ ಪೀಳಿಗೆಗೆ ನಮ್ಮ ದೈವಗಳ ಮಾಹಿತಿಯನ್ನು  ಶ್ರಮಿಸಿ ಸಂಗ್ರಹಿಸಿ ಪ್ರತ್ಯಕ್ಷ ದೈವವಾಗಿಯೇ ಕಾಣುತ್ತಿದ್ದೀರಿ , ನಿಮ್ಮ ಜ್ಞಾನ ಹಾಗೂ ಸಂಕಲ್ಪ ದೈವತ್ವದಷ್ಟೇ ಶ್ರೇಷ್ಠವಾದದು ಅಂದರೆ ಅತಿಶಯೋಕ್ತಿಯಲ್ಲದ ಸತ್ಯ ಪುಸ್ತಕದ ಓದನ್ನು ಇಂದಿನಿಂದಲೇ ಪ್ರಾರಂಬಿಸುತ್ತೆನೆ.- ಅವಿನಾಶ್ ಬಿ ಆರ್ ಕಡೂರು