Posts

ಕರಾವಳಿಯ ಸಾವಿರದೊಂದು ದೈವಗಳು ಐತಿಹಾಸಿಕ ಮಹತ್ವದ ಜಾನಪದ ಅಧ್ಯಯನ ಗ್ರಂಥ  ಡಾ. ಬಿ. ಜನಾರ್ದನ ಭಟ್

Image
 ಐತಿಹಾಸಿಕ ಮಹತ್ವದ ಜಾನಪದ ಅಧ್ಯಯನ ಗ್ರಂಥ  ಡಾ. ಬಿ. ಜನಾರ್ದನ ಭಟ್ ನನ್ನ ಕರಾವಳಿಯ ಸಾವಿರದೊಂದು ದೈವಗಳು ಗ್ರಂಥಕ್ಕೆ ಡಾ.ಜನಾರ್ದನ ಭಟ್ ಬಿ ಅವರು ಬರೆದ ಪರಿಚಯಾತ್ಮಕ ಮುನ್ನುಡಿ - ಡಾ‌ ಲಕ್ಷ್ಮೀ ಜಿ ಪ್ರಸಾದ್, ಮೊಬೈಲ್ 9480516684  https://laxmipras.blogspot.com/2023/12/blog-post_45.html?m=1 ಐತಿಹಾಸಿಕ ಮಹತ್ವದ  ಜಾನಪದ ಅಧ್ಯಯನ ಗ್ರಂಥ  ಡಾ. ಬಿ. ಜನಾರ್ದನ ಭಟ್ ತುಳು ಜಾನಪದ ಸಂಶೋಧಕಿ, ಮುಖ್ಯವಾಗಿ ದೈವಾರಾಧನೆಯ ಬಗ್ಗೆ ಅಭೂತಪೂರ್ವ ಕ್ಷೇತ್ರಕಾರ್ಯ ಮಾಡಿ ಮಾಹಿತಿಗಳನ್ನು ಸಂಗ್ರಹಿಸಿರುವ ಡಾ. ಲಕ್ಷ್ಮೀ ಜಿ. ಪ್ರಸಾದ್ ಅವರ ಮಹತ್ವದ ಕೃತಿ ‘ಕರಾವಳಿಯ ಸಾವಿರದೊಂದು ದೈವಗಳು’ ಕೃತಿಗೆ ಒಂದು ನುಡಿಸೇಸೆ ಇದು.  ಈ ಕೃತಿಯ ಹಿಂದಿರುವ ಸಂಶೋಧನೆ, ದಾಖಲಾತಿ, ಅಧ್ಯಯನ, ವಿಶ್ಲೇಷಣೆ, ಬರವಣಿಗೆ ಮತ್ತು ಗ್ರಂಥರಚನೆ – ಈ ಪ್ರಕ್ರಿಯೆಯೇ ಒಂದು ಐತಿಹಾಸಿಕ ಮಹತ್ವದ ಘಟನೆ ತುಳುನಾಡಿನಲ್ಲಿ ಸಾವಿರದಷ್ಟು ದೈವ ಭೂತಗಳಿಗೆ ಆರಾಧನೆ ಇದೆ ಎನ್ನುವುದು ಒಂದು ಅಂದಾಜಿನÀ ಹೇಳಿಕೆಯಾಗಿ ಚಾಲ್ತಿಯಲ್ಲಿತ್ತು. ಮತ್ತು ಅದು ಸರಿಯೂ ಆಗಿತ್ತು. ಆದರೆ ಅದನ್ನು ಅಧ್ಯಯನದ ಮೂಲಕ ಖಚಿತಪಡಿಸಲಾಗಿರಲಿಲ್ಲ. ಅದನ್ನು ಸಂಶೋಧನೆಯ ಮೂಲಕ ಖಚಿತ ಪಡಿಸಿ, ದಾಖಲಿಸಿರುವ ಕಾರಣಕ್ಕಾಗಿ ಇದು ಈ ಕ್ಷೇತ್ರದಲ್ಲಿ ಒಂದು ಐತಿಹಾಸಿಕ ಮಹತ್ವದ ಪ್ರಕಟಣೆಯಾಗಿದೆ. ಎರಡನೆಯದಾಗಿ ಈ ಕ್ಷೇತ್ರದಲ್ಲಿ ನಡೆದ ಅಧ್ಯಯನಾಧಾರಿತ ಕೃತಿಗಳ ಪ್ರಕಟಣೆಯ ಆಯಾಮವನ್ನು ನ...

ಕರಾವಳಿಯ ಸಾವಿರದೊಂದು ದೈವಗಳು

Image
ತುಳು ಸಂಸ್ಕೃತಿಯ ಹೊನ್ನ ಕಲಶಕ್ಕೆ ಇರಿಸಿದ ವನಿಲುಗರಿ - ಡಾ‌.ನಾ‌ ಮೊಗಸಾಲೆ ಡಾ. ಲಕ್ಷ್ಮೀ ಪ್ರಸಾದ್ (ಲಕ್ಷ್ಮೀ ವಾರಣಾಸಿ) ಅವರು ಕಾಸರಗೋಡು ಜಿಲ್ಲೆಯ ಕೋಳ್ಯೂರು ಗ್ರಾಮದ ವಾರಣಾಸಿ ಮೂಲದವರು. ಇವರ ತಂದೆ ವೇದಮೂರ್ತಿ ನಾರಾಯಣ ಭಟ್ಟರು ವಿದ್ವಾಂಸರೆಂದು ಪ್ರಸಿದ್ಧರು. ತನ್ನ ಮನೆತನವು ವೈದಿಕಾಚರಣೆಯನ್ನೇ ಹೊಂದಿದ್ದರೂ, ಕುಟುಂಬದಲ್ಲಿ ದೈವದ ಆರಾಧನೆಯನ್ನು ಮಾಡುತ್ತಿರುವುದೇಕೆ ಎಂಬ ಕುತೂಹಲವೇ ಡಾ. ಲಕ್ಷ್ಮೀ ಪ್ರಸಾದ್ ಅವರಿಗೆ ಪ್ರೇರಣೆಯಾಗಿ ಅವರು ಈ ಕುರಿತಾದ ಸಂಶೋಧನೆಗೆ ಇಳಿದರು. ಇದರಿಂದ ಕರಾವಳಿ ಕರ್ನಾಟಕದ ಅಂದರೆ ಅವಿಭಜಿತ ದ.ಕ.ಜಿಲ್ಲೆ, ಉತ್ತರ ಕನ್ನಡ ಜಿಲ್ಲೆ ಮತ್ತು ಕೊಡಗನ್ನೂ ಒಳಗೊಂಡಂತೆ ದೈವರಾಧನೆಯ ಆಶಯ ಆಕೃತಿಯನ್ನು ನಿರಂತರ ಸಂಶೋಧಿಸಲು ಅವರು ಮುಂದಾದರು. ಈ ನಿರಂತರತೆ ಇಪ್ಪತ್ತೊಂದು ವರುಷಗಳ ಕಾಲ ನಡೆದುದರ ಪರಿಣಾಮವಾಗಿ ಈ ಮೇಲಿನ ಪ್ರದೇಶಗಳಲ್ಲಿ ಒಟ್ಟು ಎರಡು ಸಾವಿರದ ಇನ್ನೂರ ಮೂವತ್ತು ದೈವಗಳು ಆರಾಧಿಸಲ್ಪಡುತ್ತವೆ ಎನ್ನುವ ಸತ್ಯ ಗೋಚರಿಸಿತು. ಹಿರಿಯ ಜಾನಪದ ತಜ್ಞರೂ ವಿದ್ವಾಂಸರೂ ಆಗಿರುವ ಪ್ರೊ| ಬಿ.ಎ.ವಿವೇಕ ರೈ ಅವರು ತಮ್ಮ ಮಹಾಪ್ರಬಂಧದಲ್ಲಿ (1985) ಇನ್ನೂರ ಅರುವತ್ತೇಳು ,ಇನ್ನೋರ್ವ ಜಾನಪದ ವಿದ್ವಾಂಸ ಪ್ರೊ| ಚಿನ್ನಪ್ಪಗೌಡರು ಇದನ್ನು ಪರಿಷ್ಕರಿಸಿ ತಮ್ಮ ಮಹಾಪ್ರಬಂಧದಲ್ಲಿ (1990) ಮುನ್ನೂರು , ಮುಂದೆ ರಘುನಾಥ ವರ್ಕಾಡಿಯವರು ತಮ್ಮ ‘ಕಂಡಂಬಾರು ಮಲರಾಯ’ ಕೃತಿಯಲ್ಲಿ (2011) ನಾಲ್ಕು ನೂರ ಏಳು ದೈವಗಳ ಹೆಸರುಗಳನ್ನು ಪಟ್ಟ...